ಉಲೂಕ
1 ಮಹಾಭಾರತದಲ್ಲಿ ಶಕುನಿಯ ಮಗ, ಕುರುಕ್ಷೇತ್ರ ಯುದ್ಧ ಪ್ರಾರಂಭವಾಗುವುದಕ್ಕೆ ಮುಂಚೆ ದುರ್ಯೋಧನ ಇವನನ್ನು ಯುಧಿಷ್ಠಿರನ ಸಮೀಪಕ್ಕೆ ದೂತನನ್ನಾಗಿ ಕಳಿಸುತ್ತಾನೆ. ಯುದ್ಧದಲ್ಲಿ ಹೋರಾಡಿ ಪೌರುಷವನ್ನು ತೋರಿಸಬೇಕೆಂದೂ ಗೆದ್ದರೆ ಮಾತ್ರ ರಾಜ್ಯಲಾಭವೆಂದೂ ಸೋತರೆ ವನವಾಸವೆಂದೂ ದುರ್ಯೋಧನ ಕಳಿಸಿದ ಸಂದೇಶದ ತಾತ್ಪರ್ಯ. ಮೊದಲದಿನ ಚೇದಿರಾಜನೊಡನೆ ಯುದ್ಧ ಮಾಡುತ್ತಾನೆ. ಕಡೆಯಲ್ಲಿ ಸಹದೇವನಿಂದ ಹತನಾಗುತ್ತಾನೆ. ಶಾಕುನಿ, ಕೈತವ, ಸೌಬಲಸುತ, ಕಿತವ ಇವು ನಾಮಾಂತರಗಳು. 2 ಇಂದ್ರನ ಹೆಸರುಗಳಲ್ಲೊಂದು. 3 ಒಬ್ಬ ಯಕ್ಷ, 4 ಪ್ರಾಚೀನನಾದ ಋಷಿಯೊಬ್ಬನ ಹೆಸರು. 5 ಉತ್ತರ ಭಾರತದಲ್ಲಿನ ಒಂದು ದೇಶ. ಇದನ್ನು ಬೃಹಂತನೆಂಬ ರಾಜ ಆಳುತ್ತಿದ್ದನೆಂದು ಮಹಾಭಾರತದಲ್ಲಿ ಹೇಳಿದೆ.				
	(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ